top
logo
Karnataka Power Transmission Corporation Limited
top
Archieves

ಕವಿಪ್ರನಿನಿಯ ಬಗ್ಗೆ
ಮಂಡಳಿಯ ನಿರ್ದೇಶಕರು ಮತ್ತು ಕವಿಪ್ರನಿನಿಯ ವಿವರಗಳ ಸಂಕ್ಷಿಪ್ತ ರಚನೆ ಮಂಡಳಿಯ ನಿರ್ದೇಶಕರು

ಮಂಡಳಿಯ ನಿರ್ದೇಶಕರು

  • ಕವಿಪ್ರನಿನಿಯ ಬಗ್ಗೆ

  • ಕವಿಪ್ರನಿನಿಯು ಕಂಪನಿ ಕಾಯ್ದೆ 1956ರ ಅಡಿಯಲ್ಲಿ ನೊಂದಾಯಿತವಾದ ಸಂಸ್ಥೆಯಾಗಿದ್ದು ದಿನಾಂಕ: 18.07.1999 ರಂದು ಸಂಯೋಜಿಸಲ್ಪಟ್ಟಿತ್ತು ಮತ್ತು ಕರ್ನಾಟಕ ಸರ್ಕಾರವು 1455 ಕೋಟಿ ರೂಗಳ ಅಧಿಕೃತ ಪಾಲು ಬಡವಾಳದೊಂದಿಗೆ ಸಂಪೂರ್ಣ ಒಡೆತನದಲ್ಲಿದೆ. ಕವಿಪ್ರನಿನಿಯು ದಿನಾಂಕ: 01.06.1999 ರಂದು ರಚನೆಗೊಂಡಿದ್ದು ಈ ಹಿಂದೆ ಕವಿಮಂಯಲ್ಲಿದ್ದ ಪ್ರಸರಣ ಮತ್ತು ವಿತರಣೆ ಕಾರ್ಯಗಳನ್ನು ಬೇರ್ಪಡಿಸಲಾಯಿತು.

  • ಕವಿಪ್ರನಿನಿಯ ನಿಗಮ ಕಛೇಯಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ನಿರ್ದೇಶಕರು ನೇತೃತ್ವ ವಹಿಸುತ್ತಾರೆ. ಅವರಿಗೆ ನಾಲ್ಕು ಕ್ರಿಯಾತ್ಮಕ ನಿರ್ದೇಶಕರು ಸಹಾಯ ಮಾಡುತ್ತಾರೆ. ಕವಿಪ್ರನಿನಿಯು ಗರಿಷ್ಠ 12 ನಿರ್ದೇಶಕರನ್ನು ಹೊಂದಿದೆ.

  • ಕವಿಪ್ರನಿನಿಯು ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ವಿದ್ಯುತ್ ಪ್ರಸರಣ ಕಾರ್ಯಚಟುವಟಿಕೆಯೊಂದಿಗೆ ಪ್ರಸರಣ ಮಾರ್ಗಗಳ ನಿರ್ಮಾಣ, ವಿದ್ಯುತ್ ಕೇಂದ್ರಗಳ ನಿರ್ಮಾಣ ಮತ್ತು 400/220/110/66 ಕೆ.ವಿ ಉಪಕೇಂದ್ರಗಳ ನಿರ್ವಹಣೆಗೆ ಒಳಪಟ್ಟಿರುತ್ತದೆ. ಹಲವು ಹೊಸ ಮಾರ್ಗಗಳ ಮತ್ತು ಉಪಕೇಂದ್ರಗಳನ್ನು ಸೇರಿಸಲಾಗಿದೆ ಮತ್ತು ಅಸ್ತಿತ್ವದಲ್ಲಿದರುವ ನಿಲ್ದಾಣಗಳನ್ನು ಪ್ರಸರಣ ಜಾಲದಲ್ಲಿ ಮಾರ್ಪಡಿಸಲಾಗಿದೆ . ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಹೊರಡಿಸಿದ ಪರವನಾಗಿ ಅಡಿಯಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ.

  • ಕವಿಪ್ರನಿನಿಯಲ್ಲಿ ಒಟ್ಟು ನಾಲ್ಕು 400 ಕೆವಿ ಉಪಕೇಂದ್ರ, 97-220 ಕೆವಿ ಉಪಕೇಂದ್ರ, 385-11 ಕೆವಿ ಉಪಕೇಂದ್ರ ಹಾಗೂ 602-66 ಕೆವಿ ಉಪಕೇಂದ್ರಗಳಿವೆ, ದಿನಾಂಕ: 31.03.2016 ಕ್ಕೆ ಒಟ್ಟು ಪ್ರಸರಣ ಮಾರ್ಗ, 34251 ಸಕ್ರ್ಯೂಟ್ ಕಿಲೋ ಮೀಟರ್ (ಸ.ಕಿಮೀ) ಆಗಿದೆ.KPTCL has 4 No. 400 KV Station, 97 No. of 220 KV Station, 385 No. of 110 KV Station and 602 No. of 66 KV Station. The Total Transmission Line in CKMs is 34251 as on 31.03.2016.

  • ಕವಿಪ್ರನಿನಿಯು ಈ ಕೆಳಕಂಡ ಅಂಗಗಳನ್ನು ಒಳಗೊಂಡಿದೆ.
    • ನಿಗಮ ಕಾರ್ಯಾಲಯ ಕಛೇರಿ, ಕಾವೇರಿ ಭವನ,
    • ಆರು ಪ್ರಸರಣವಲಯಗಳು ಹಾಗೂ ಪ್ರತೀ ವಲಯಕ್ಕೆ ಮುಖ್ಯ ಇಂಜಿನಿಯರ್ ಮುಖ್ಯಸ್ಥರಾಗಿರುತ್ತಾರೆ.
    • ರಾಜ್ಯ ವಿದ್ಯುತ್ ರವಾನೆ ಕೇಂದ್ರ (ಎಸ್.ಎಲ್.ಡಿ.ಸಿ.)
    • ಸ್ಕಾಡ (ಮೇಲ್ವಿಚಾರಣ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹಿಸುವಿಕೆ)

  • 2014-15 ರ ಕವಿಕಪ್ರನಿನಿಯು ವಾರ್ಷಿಕ ವಹಿವಾಟು ರೂ. 2395.80 ಕೋಟಿಗಳಷ್ಟಾಗಿದೆ.

  • ಕವಿಪ್ರನಿನಿ ಬೇರ್ಪಡುವಿಕೆ (ಆನ್‍ಬಂಡಲ್ಡ್)

  • ಸರ್ಕಾರದ ಆದೇಶ ಸಂಖ್ಯೆ 69 ಬಿಎಸ್‍ಆರ್ 2001, ಬೆಂಗಳೂರು ದಿನಾಂಕ: 15.12.2002 ರಂತೆ ಕವಿಪ್ರನಿನಿಯು ನಾಲ್ಕು ವಿತರಣಾ ಕಂಪನಿಗಳಾಗಿ ಬೇರ್ಪಟ್ಟಿತು.

  • ಇದಕ್ಕೆ ಸಂಬಂಧಿಸಿದಂತೆ ವಿದ್ಯುಚ್ಛಕ್ತಿ ವಿತರಣೆ ಕವಿಪ್ರನಿನಿಯಿಂದ ಸಂಪೂರ್ನವಾಗಿ ಬೇರ್ಪಟ್ಟಿತು. ಹಾಗೂ ಕವಿಪ್ರನಿನಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿದ್ಯುತ್ ಪ್ರಸರಣ ಕಾರ್ಯ ಹಾಗೂ 66 ಕೆವಿ ಮತ್ತು ಹೆಚ್ಚು ಇರುವ ವಿದ್ಯುತ್ ಕೇಂದ್ರಗಳ ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತದೆ.

  • ದಿನಾಂಕ: 30.04.2002ರಲ್ಲಿ ನೊಂದಾಯಿಸಲ್ಪಟ್ಟ ನಾಲ್ಕು ಹೊಸ ಸ್ವತಂತ್ರ ವಿತರಣಾ ಕಂಪನಿಗಳು ಬೆವಿಕಂ, ಮಂವಿಕಂ, ಹುವಿಕಂ ಹಾಗೂ ಗುವಿಕಂ ಈ ಕಂಪನಿಗಳು ತಮ್ಮ ಕಾರ್ಯವನ್ನು ದಿನಾಂಕ: 01.06.2002 ರಿಂದ ನಿರ್ವಹಿಸುವ ಹಾಗೂ ಈ ಕಂಪನಿಗಳು ತಮ್ಮ ಅಧಿಕಾರಿ ವ್ಯಾಪ್ತಿಯೊಳಗೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿ ಹೊಂದಿದೆ.

  • ಕರ್ನಾಟಕ ಸರ್ಕಾರದ ಆದೇಶ ಇಎನ್ 08 ಪಿಎನ್‍ಆರ್ 2005/262 ರಂತೆ ಐದನೇ ವಿತರಣಾ ಕಂಪನಿ ಚಾ.ವಿ.ಸ.ನಿ (ಸೆಸ್ಕ್) ಕಂಪನಿ ಕಾಯ್ದೆ 1956ರಡಿಯಲ್ಲಿ ಸಂಘಟಿತವಾದ ನಿಗಮವಾಗಿದ್ದು ಐದು ಜಿಲ್ಲೆಗಳಿಗೆ ವಿತರಣೆ ಮತ್ತು ವಿದ್ಯುಚ್ಛಕ್ತಿ ಪೂರೈಕೆಗೆ ಸಂಬಂಧಿಸಿದಂತೆ ಕವಿಪ್ರನಿನಿ ಹಾಗೂ ಮವಿಕಂ ಗೆ ಉತ್ತರಾಧಿಕಾರಿಯಾಗಿದೆ.

  • ಕಂಪನಿ ಕಾಯ್ದೆ 1956ರಡಿಯಲ್ಲಿ 20.08.2007 ರಂದು ಪಿಸಿಕೆಎಲ್ ಅನ್ನು ಸಂಘಟಿಸಲಾಯಿತು ಮತ್ತು ಅದರ ವ್ಯವಹಾರ ಕಾರ್ಯಾಚರಣೆಗಳು 16.10.2007 ರಿಂದ ಜಾರಿಗೆ ಬಂದವು ಪಿಸಿಕೆಎಲ್ ಸಾಮಥ್ರ್ಯದ ಸೇರ್ಪಡೆಗೆ ಮತ್ತು ವಿದ್ಯುತ್ ಕಂಪನಿ ಪರವಾಗಿ ಅಧಿಕಾರಿಗಳನ್ನು ಪಡೆದು ವಿವಿಧ ಮೂಲಗಳಿಂದ ವಿದ್ಯುತ್ ಶಕ್ತಿ ವಿನಿಮಯ, ಬ್ಯಾಂಕಿಗ್ (SWಂP) ಮತ್ತು ದ್ವಿಪಕ್ಷೀಯ ವಹಿವಾಟಿಗಳುಗಳನ್ನು ನಡೆಸುತ್ತಿದೆ. ಪಿಸಿಕೆಎಲ್ ಇತರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಏಜೆನ್ಸಿಗಳೊಂದಿಗೆ ವಿದ್ಯುತ್ ಸಂಬಂಧಿತ ವಿಷಯಗಳ ಮೇಲೆ ವ್ಯವಹಾರ ನಡೆಸುತ್ತದೆ.

 

maintainedbykerc